Change View:     
ಅಂತಾರಾಷ್ಟ್ರೀಯ
(ಭಾನುವಾರ 20 ಏಪ್ರಿಲ್ 2014)     
ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಸುಕುರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಒಂದು ಟ್ರೇಲರ್ ಮತ್ತು ಒಂದು ಬಸ್‌ ನಡುವೆ ಮುಖಾ ಮುಖಿ ಡಿಕ್ಕಿ ಹೊಡೆದ ಕಾರಣ ಸುಮಾರು 30 ರಷ್ಟು ಜನರು ಸಾವನ್ನಪ್ಪಿದ್ದಾರೆ ಮತ್ತು 15 ಜನರಿಗೆ ತೀವ್ರವಾದ ಗಾಯಗಳಾಗಿವೆ. ಸುಕುರ ಪಾನೊ ಅಕಿಲ ಕ್ಷೇತ್ರದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಸುರಕ್ಷಾ ಅಧಿಕಾರಿಗಳು ತಿಳಿಸಿದ್ದಾರೆ. ಡೆರಾ ಗಾಜಿಯಿಂದ ಕರಾಚಿಗೆ ಹೊರಟಿರುವ ಬಸ್‌‌‌ ವೇಗದಲ್ಲಿ ಟ್ರೆಲರ್‌‌ಗೆ ಡಿಕ್ಕಿ ಹೊಡೆದಿದೆ . ಇದರಲ್ಲಿ 30 ಜನರು ಸಾವನ್ನಪ್ಪಿದ್ದಾರೆ.
(ಶನಿವಾರ 19 ಏಪ್ರಿಲ್ 2014)     
ಕರಾಚಿ: ಕರಾಚಿಯಲ್ಲಿ ಹಿರಿಯ ಪತ್ರಕರ್ತ, ಜಿಯೋ ನ್ಯೂಸ್ ಹಿರಿಯ ನಿರೂಪಕ ಹಮೀದ್ ಮೀರ್ ಮೇಲೆ ಅಜ್ಞಾತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಏರ್‌ಪೋರ್ಟ್ ಬಳಿ ವಾಹನದಲ್ಲಿ ತೆರಳುತ್ತಿದ್ದಾಗ ಅವರ ಫೈರಿಂಗ್ ಮಾಡಲಾಗಿದೆ.ನಾಥಾ ಖಾನ್ ಸೇತುವೆ ಬಳಿ ಮಿರ್ ವಾಹನದ ಮೇಲೆ ಅಜ್ಞಾತ ವ್ಯಕ್ತಿಗಳು ಗುಂಡಿನ ಮಳೆಗರೆದಾಗ ತೀವ್ರ ಗಾಯಗಳಾದ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಹಮೀದ್ ಮಿರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವರು ಕರಾಚಿ ವಿಮಾನನಿಲ್ದಾಣದಿಂದ ಜಿಯೋ ಕಚೇರಿಗೆ ತೆರಳುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಯಿತು
(ಶನಿವಾರ 19 ಏಪ್ರಿಲ್ 2014)     
ಕಠ್ಮಂಡು: ಮೌಂಟ್ ಎವರೆಸ್ಟ್ ಶಿಖರದ ಇತಿಹಾಸದಲ್ಲಿ ಹಿಂದೆಂದೂ ದಾಖಲಾಗದ ಅತ್ಯಂತ ಮಾರಕ ಹಿಮಪಾತ ಸಂಭವಿಸಿದ್ದು, 12 ಜನ ನೇಪಾಳಿ ಶೆರ್ಪಾ ಗೈಡ್‌ಗಳು ಮತ್ತು 7 ಜಿನರು ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ. 6 ಮಂದಿ ಗಾಯಗೊಂಡಿದ್ದಾರೆ. ಬೆಳಿಗ್ಗೆ 6.45ರ ಸುಮಾರಿಗೆ 5800 ಮೀಟರ್ ಎತ್ತರದಲ್ಲಿ ಪಾಪ್‌ಕಾರ್ನ್ ಫೀಲ್ಡ್ ಎಂಬ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.ಗೈಡ್‌ಗಳು ಬಹುತೇಕ ಮಂದಿ ನೇಪಾಳದವರಾಗಿದ್ದು ಎವೆರೆಸ್ಟ್ ಬೇಸ್ ಕ್ಯಾಂಪ್‌ನಿಂದ ಕ್ಯಾಂಪ್ ಒಂದಕ್ಕೆ ಉಪಕರಣಗಳನ್ನು ಸಾಗಿಸುತ್ತಿದ್ದಾಗ 20,000 ಅಡಿ ಎತ್ತರದಲ್ಲಿ ಹಿಮಪಾತ ಸಂಭವಿಸಿತು
(ಶನಿವಾರ 19 ಏಪ್ರಿಲ್ 2014)     
ಮೆಕ್ಸಿಕೋ ಸಿಟಿಯಲ್ಲಿ ಶುಕ್ರವಾರ ರಿಕ್ಟರ್ ಮಾಪಕ 7 ಪ್ರಮಾಣದ ಭೂಕಂಪ ದಾಖಲಾಗಿದೆ ಎಂದು ವರದಿಯಾಗಿದೆ
(ಶುಕ್ರವಾರ 18 ಏಪ್ರಿಲ್ 2014)     
ಭೂಮಿಯಷ್ಟೇ ಗಾತ್ರದ ಗೃಹವೊಂದು ಪತ್ತೆಯಾಗಿದ್ದು, ಆ ಗ್ರಹದಲ್ಲಿ ನೀರು, ಗಾಳಿ, ಬೆಳಕು ಎಲ್ಲವೂ ಇದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕೆ ಅರ್ಥ್ 2.0 ಎಂದು ವಿಜ್ಞಾನಿಗಳು ನಾಮಕರಣ ಮಾಡಿದ್ದಾರೆ. ಸೌರಮಂಡಲದಿಂದ ಹೊರವಾತಾವರಣದಲ್ಲಿ ಈ ಗ್ರಹವಿದ್ದು, ಕೆಪ್ಲರ್ ಟೆಲಿಸ್ಕೋಪ್ ಮೂಲಕ ಈ ಗ್ರಹವನ್ನು ಪತ್ತೆಹಚ್ಚಲಾಗಿದೆ. ಇಲ್ಲಿ ಸುಮಾರು ವರ್ಷಗಳ ಹಿಂದೆ ಅನ್ಯಜೀವಿಗಳಾದ ಏಲಿಯನ್ಸ್‌ಗಳು ವಾಸ ಮಾಡಿದ್ದವೆಂದು ಹೇಳಲಾಗುತ್ತಿದೆ.
Go to / 3765 page(s) | ‹‹ Prev|Next ››