Change View:     
ಕರ್ನಾಟಕ ಸುದ್ದಿ
(ಭಾನುವಾರ 20 ಏಪ್ರಿಲ್ 2014)     
ಕನಕಪುರ: ಇಂದು ಬೆಳ್ಳಿಗ್ಗೆ ಕನಕಪುರ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ರಾಮನಗರ ಜಿಲ್ಲೆಯ ಕನಕಪುರದ ತಾಲೂಕಿನಲ್ಲಿ ಮನೆಯ ಗೋಡೆಗಳು ಕೂಡ ಬಿರುಕು ಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಳಿಗ್ಗೆ 7 ರಿಂದ 8 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು , ಜನರು ಬಹಳಷ್ಟು ಆತಂಕಕ್ಕೋಳಗಾಗಿದ್ದಾರೆ. ಭೂಕಂಪ ಆದ ನಂತರ ಜನರೆಲ್ಲ ಮನೆಯಿಂದ ಹೊರಗಡೆ ಬಂದರು ಮತ್ತು ಇವರ ಮುಖದಲ್ಲಿ ಭಯ ತುಂಬಿತ್ತು.
(ಶನಿವಾರ 19 ಏಪ್ರಿಲ್ 2014)     
ಗುಲ್ಬರ್ಗ: ಗುಲ್ಬರ್ಗದ ಬಳಿ ಇಬ್ಬರು ರೌಡಿಗಳ ನಡುವೆ ಗುಂಡಿನ ಕಾಳಗದಲ್ಲಿ ನೆತ್ತರ ಹೊಳೆ ಹರಿದಿದೆ. ಕುಖ್ಯಾತ ರೌಡಿಶೀಟರ್ ಹಲವಾರು ಪ್ರಕರಣದಲ್ಲಿ ಆರೋಪಿಯಾಗಿದ್ದ ರವಿ ಬೈರಾಮಡಗಿ ರೌಡಿ ಸೀನ್ಯಾ ಜತೆ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದಾನೆ. ರೌಡಿ ಸೀನ್ಯಾಗೂ ಕೂಡ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿದ್ದಾನೆ. ಇವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗುತ್ತಿತ್ತು. ಸೀನ್ಯಾ ರವಿಯ ತಲೆಗೆ ಗುಂಡು ಹಾರಿಸಿ ತಲೆಗೆ ಮಚ್ಚಿನಿಂದ ಹೊಡೆದು ಕೊಂದಿದ್ದಾನೆ.
(ಶನಿವಾರ 19 ಏಪ್ರಿಲ್ 2014)     
ಬೆಂಗಳೂರು: ಕರ್ನಾಟಕ ಸರ್ಕಾರ ಕಾವೇರಿ ನೀರು ಬಿಡುತ್ತಿಲ್ಲವೆಂದು ತಮಿಳುನಾಡು ಮುಖ್ಯಮಂತ್ರಿ ಜಯಲಿಲತಾ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ತಮಿಳುನಾಡಿಗೆ ನೀರನ್ನು ಹರಿಸಲಾಗುತ್ತಿದೆ ಎಂದು ತಿಳಿಸಿದರು.ಜಯಲಲಿತಾ ಆರೋಪಗಳನ್ನು ನಿರಾಧಾರ ಎಂದು ಬಣ್ಣಿಸಿದ ಅವರು, ಜಯಲಲಿತಾ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಇದಕ್ಕೆ ಸಂಬಂಧಿಸಿದಂತೆ ದೃಢ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.ಅವರಿಬ್ಬರೂ ಮೂಲ ಕಾರಣ.
(ಶನಿವಾರ 19 ಏಪ್ರಿಲ್ 2014)     
ಹುಬ್ಬಳ್ಳಿ: ಮುಂಬೈನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನಕ್ಕೆ ರನ್‌ವೇನಲ್ಲಿ ಹದ್ದು ಡಿಕ್ಕಿಹೊಡೆದು ವಿಮಾನದ ಮುಂಭಾಗ ಜಖಂಗೊಂಡಿದೆ. ಹುಬ್ಬಳ್ಳಿಯ ಏರ್‌ಪೋರ್ಟ್‌ನಲ್ಲಿ ಈ ಘಟನೆ ಸಂಭವಿಸಿದೆ. ವಿಮಾನದಲ್ಲಿ ಸುಮಾರು 65 ಜನರು ಪ್ರಯಾಣಿಸುತ್ತಿದ್ದರು. ಪೈಲಟ್ ಕುಳಿತುಕೊಳ್ಳುವ ವಿಮಾನದ ಮುಂಭಾಗಕ್ಕೆ ಹದ್ದು ಡಿಕ್ಕಿಹೊಡೆಯಿತೆಂದು ಹೇಳಲಾಗಿದೆ. ಇದರಿಂದ ವಿಮಾನದ ಮೂಗಿನ ಭಾಗಕ್ಕೆ ಸ್ವಲ್ಪ ಹಾನಿಯಾಗಿದ್ದು, ವಿಮಾನ ನಿಧಾನವಾಗಿ ರನ್‌ವೇನಲ್ಲಿ ಚಲಿಸುತ್ತಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ.
(ಶನಿವಾರ 19 ಏಪ್ರಿಲ್ 2014)     
ಕೃಷ್ಣಗಿರಿ: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಕನಿಷ್ಠ 20 ಸ್ಥಾನಗಳಲ್ಲಿ ಗೆಲವು ಗಳಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಶನಿವಾರ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಚುನಾವಣೆ ಫಲಿತಾಂಶ ರಾಜ್ಯದ ಆಡಳಿತಕ್ಕೆ ದಿಕ್ಸೂಚಿಯಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು. ಸಿಎಂ ಸ್ಥಾನದಿಂದ ಕೆಳಗಿಳಿಸುವುದಾಗಿ ಯಾವ ಎಚ್ಚರಿಕೆಯನ್ನೂ ತಮಗೆ ನೀಡಲಾಗಿಲ್ಲ. ಕೃಷ್ಣಗಿರಿ ಸೇರಿ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು
Go to / 3992 page(s) | ‹‹ Prev|Next ››