|
(ಶುಕ್ರವಾರ 28 ಅಕ್ಟೋಬರ್ 2011)
ಯೂರೋಪ್ ಕನ್ನಡಿಗರು ಸೇರಿಕೊಂಡು ಲಂಡನ್‌ನಲ್ಲಿ ಅಕ್ಟೋಬರ್ 22, 23ರಂದು ಎರಡು ದಿನಗಳ "ವಿಶ್ವ ಕನ್ನಡ ಸಮ್ಮೇಳನ ಯುರೋಪ್ 2011" ಆಯೋಜಿಸಿದ್ದು, ಹೊರ ನಾಡಿನ ಕನ್ನಡಿಗರು ಅಲ್ಲಿ ಕನ್ನಡದ ನುಡಿಯೊಂದಿಗೆ ಸಂಭ್ರಮಿಸಿದರು. ಇದರಲ್ಲಿ ಕನ್ನಡ ಚಿತ್ರರಂಗದ ಶ್ರೀನಾಥ್, ಅಂಬರೀಶ್, ಸುಮಲತಾ, ರಮ್ಯಾ, ದೊಡ್ಡರಂಗೇಗೌಡ, ಕರ್ನಾಟಕದ ರಾಜಕಾರಣಿಗಳಾದ ಡಿ.ಎಚ್.ಶಂಕರಮೂರ್ತಿ, ಡಿ.ಕೆ.ಶಿವಕುಮಾರ್, ನರೇಂದ್ರ ಸ್ವಾಮಿ ಮುಂತಾದವರು ಭಾಗವಹಿಸಿ, ಹೊರನಾಡ ಕನ್ನಡಿಗರಿಗೆ ಕನ್ನಡದ ನೆಲದ ಅನುಭವ ದೊರಕಿಸಿಕೊಟ್ಟರು.
|