Change View:     
ಸುದ್ದಿ/ಗಾಸಿಪ್
(ಶನಿವಾರ 19 ಏಪ್ರಿಲ್ 2014)     
ಕಥಕಳಿ ಗೆಟಪ್‌ ಮುಖಾಂತರ ಕೋಮಲ್ ಕುಮಾರ್ ರಂಜಿಸಲು ಸಿದ್ಧ ಆಗಿದ್ದಾರೆ. ಕಥಕಳಿ ಪಾತ್ರಧಾರಿಯಂತೆ ವೇಷಧರಿಸಿ ಕುಣಿದಿದ್ದಾರೆ ಕೋಮಲ್‌. ತಮ್ಮ ಈ ಪ್ರತಿಭೆ ತೋರಿದ ಚಿತ್ರ ನನ್ ಅದರ ದ್ಯಾನ್ , 'ಪುಂಗಿದಾಸ' ಈ ಚಿತ್ರದ ಹಾಡೊಂದರಲ್ಲಿ ಕೋಮಲ್‌ ಕಥಕಳಿ ಗೆಟಪ್‌ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ನಾಯಕಿಯನ್ನು ಇಂಪ್ರಸ್‌ ಮಾಡಲು ಕೋಮಲ್‌ ಈ ರೀತಿಯ ಗೆಟಪ್‌ ಹಾಕಿದ್ದಾರಂತೆ. ಅವರು ನರ್ತಿಸುವ ಡ್ಯಾನ್ಸ್ ಗೆ ಕೈಲಾಶ್‌ ಖೇರ್‌ ಹಾಡಿದ್ದಾರೆ. 'ಆಜಾರೇ ಆಜಾರೇ ...' ಹಾಡಿಗೆ ಕೋಮಲ್‌ ನರ್ತಿಸಿದ್ದಾರೆ . ಚಿತ್ರದಲ್ಲಿ ನಾಯಕಿಯಾಗಿ ಆಸ್ಮಾ ಕಾಣಿಸಿಕೊಂಡಿದ್ದಾರೆ. ಶ್ರೀನಾಥ್‌ ಇದನ್ನು ನಿರ್ದೇಶಿಸುತ್ತಿದ್ದಾರೆ.
(ಶನಿವಾರ 19 ಏಪ್ರಿಲ್ 2014)     
ಗಂಡ ಹೆಂಡ್ತಿ ಖ್ಯಾತಿಯ ಸಂಜನಾ ಸಿಕ್ಕಾಪಟ್ಟೆ ಬೇಸರ ಹೊಂದಿದ್ದಾಳೆ. ಆಕೆ ನಟನೆಯ ಹೊಸ ಚಿತ್ರ ಅಗ್ರಜದಲ್ಲಿ ತನ್ನನ್ನು ಕೆಟ್ಟದಾಗಿ ತೋರಿಸಿದ್ದಾರೆ ಎನ್ನುವುದೇ ಆಕೆಯ ಬೇಸರ. ಮೊದಲ ದಿನ ಮೊದಲ ಷೋ ವೀಕ್ಷಿಸಿದ ಬಳಿಕ ಆಕೆ ಈ ಬಗ್ಗೆ ಅಭಿಪ್ರಾಯವನ್ನು ಟ್ವೀಟಿಸಿ ಹೇಳಿದ್ದಾಳೆ. ಕಥೆಯಲ್ಲಿ ಇರುವ ಪಾತ್ರದಂತೆ ನನ್ನನ್ನು ತೋರಿಸಿಲ್ಲ. ನನಗೆ ಇದರಿನ ತುಂಬಾ ದುಃಖ ಆಗಿದೆ ಎನ್ನುವ ಮಾತನ್ನು ಆಕೆ . ಚಿತ್ರದಲ್ಲಿನ ಒಂದು ಸ್ನಾನದ ಸೀನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ.
(ಶನಿವಾರ 19 ಏಪ್ರಿಲ್ 2014)     
ಕೆಂಡಸಂಪಿಗೆ ಎನ್ನುವುದು ಸೂರಿ ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು. ಅವರು ಮತ್ತೊಮ್ಮೆ ಹೊಸ ಪ್ರಯೋಗಳತ್ತ ಕೈ ಚಾಚಿದ್ದಾರೆ. ಅದರ ಒಟ್ಟು ಪರಿಣಾಮವೇ ಈ ಕೆಂಡ ಸಂಪಿಗೆ ಚಿತ್ರ. ದೊಡ್ಡಮನೆ ಹುಡುಗ, ಕೆಂಡಸಂಪಿಗೆ, ಕಂಟ್ರಿ ಪಿಸ್ತೂಲು –ಈ ಮೂರು ಚಿತ್ರಗಳ ನಿರ್ದೇಶನ ಮಾಡಲು ಹೊರಟಿರುವ ಸೂರಿ ಅವರ ಮೊದಲ ನಿರ್ದೇಶನದ ಚಿತ್ರ ಯಾವುದು ಎನ್ನುವ ಸಂದೇಹಕ್ಕೆ ಉತ್ತರ ನೀಡಿದ್ದಾರೆ ಸೂರಿ.
(ಶನಿವಾರ 19 ಏಪ್ರಿಲ್ 2014)     
2014ರ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯು ಪ್ರಕಟ ಆಗಿದೆ. ಆದರೆ ಅದರಲ್ಲಿ ಕನ್ನಡದ ಭಿನ್ನ ಚಿತ್ರ ಲುಸಿಯಾಗೆ ಯಾವುದೇ ಪ್ರಶಸ್ತಿ ದೊರಕಿಲ್ಲ. ಇದರಿಂದ ನಿರ್ದೇಶಕ ಪವನ್ ಕುಮಾರ್ ಗೆ ಬೇಸರ ಆಗಿದೆ. ಅವರು ಅದರ ಬಗ್ಗೆ ಬೇಸರ ವನ್ನು ಟ್ವಿಟ್ ಮಾಡಿ ವ್ಯಕ್ತ ಪಡಿಸಿದರು.
(ಶನಿವಾರ 19 ಏಪ್ರಿಲ್ 2014)     
ಕಿಚ್ಚ ಸುದೀಪ್ ನಟನೆಯ ಕನ್ನಡದ ಬಚ್ಚನ್ ಸಿನಿಮಾ ಈಗ ತೆಲುಗಲ್ಲೂ ಸಹ ಪ್ರದರ್ಶಿತ ಆಗಲು ಸಿದ್ಧತೆ ನಡೆಸಿದೆ ಟ್ರಾಫಿಕ್, ವೀರುಡೊಕ್ಕಡೆ ಚಿತ್ರಗಳ ಬಳಿಕ ಭೀಮವರಮ್ ಟಾಕೀಸ್ ಲಾಂಛನದ ಅಡಿಯಲ್ಲಿ ರಾಮಸತ್ಯನಾರಾಯಣ ಅವರು ಬಚ್ಚನ್ ಚಿತ್ರ ನೀಡುತ್ತಿದ್ದಾರೆ. ಈಗ ಚಿತ್ರದಲ್ಲಿ ಅಪರೂಪದ ಖಳ ನಾಯಕ ನಟನೆಯ ಮೂಲಕ ತೆಲುಗು ಭಾಷಿಕ ಪ್ರೇಕ್ಷಕರ ಮನ ಗೆದ್ದಿರುವ ಸುದೀಪ್ ಬಚ್ಚನ್ ಮುಖಾಂತರ ನಾಯಕರಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಜೊತೆ ಜಗಪತಿ ಬಾಬು, ಬೋಮ್ಮಾಲಿ ರವಿಶಂಕರ್, ಭಾವನ, ತುಲೀಪ್ ಜೋಷಿ ಮುಂತಾದವರು ನಟಿಸಿದ್ದಾರೆ. ಶಶಾಂಕ್ ನಿರ್ದೇಶನ, ವಿ. ಹರಿಕೃಷ್ಣ ಸಂಗೀತ .
Go to / 1772 page(s) | ‹‹ Prev|Next ››