Change View:     
ಸಿನಿಮಾ ವಿಮರ್ಶೆ
(ಸೋಮವಾರ 10 ಫೆಬ್ರವರಿ 2014)     
ಉಪೇಂದ್ರ ನಟನೆಯ ಚಂದ್ರು ನಿರ್ದೇಶನದ ಚಿತ್ರ ಬ್ರಹ್ಮ ಇತ್ತೀಚಿಗೆ ಬಿಡುಗಡೆ ಆಯಿತು, ಬಹು ನಿರೀಕ್ಷಿತ ಈ ಚಿತ್ರದ ಬಗ್ಗೆ ಆರಂಭದಿಂದಲೂ ಅನೇಕ ಸಂಗತಿಗಳು ಹೊರ ಬಂದಿದ್ದವು. ಅಂತು ಕಡೆಗೆ ಈ ಚಿತ್ರ ಅಭಿಮಾನಿಗಳ ಕೈಸೇರಿದೆ. ಉಪ್ಪಿ ಅವರ ಚಿತ್ರಗಳಲಿ ಏನಾದರೊಂದು ವಿಶೇಷ ಇರಲೇ ಬೇಕು. ಹಾಗೆ ಆಗಿದೆ ಇಲ್ಲಿ. ಇದೊಂದು ರಾಬಿನ್ ಹುದ್ ರೀತಿಯ ಸಿನಿಮ. ಅಮ್ಮನನ್ನು ಕಳೆದು ಕೊಂದ ಅನಾಥ ಹುಡುಗ ಬೆಳೆದು ದೊಡ್ಡವನಾದ ನಂತರ ಹಣ ಶ್ರೀಮಂತರ ಬಳಿ ಲೂಟಿ ಮಾಡಿ ಅದನ್ನು ಬಡವರಿಗೆ ಹಂಚಿ ಪಾಪ ತೊಳೆದುಕೊಳ್ಳುತ್ತಾ ಬಂದಿರುತ್ತಾನೆ.
(ಸೋಮವಾರ 18 ನವೆಂಬರ್ 2013)     
ಕೆಲವು ಬಾರಿ ನಿರ್ದೇಶಕರು ಏನೂ ಮಾಡೋಕೆ ಆಗಲ್ಲ. ಏಕೆಂದರೆ ಚಿತ್ರದ ಕಥೆ ರೀತಿ ಇರುತ್ತದೆ. ಅದೇ ರೀತಿ ಜೀತು ಚಿತ್ರವೂ ಸಹ.ಇದು ಕನ್ನಡಲ್ಲಿ ಈಗಾಗಲೇ ಸೂಪರ್ ಹಿಟ್ ಆಗಿರುವ ಚಿತ್ರಗಳನ್ನು ನೆನಪಿಸುತ್ತದೆ. ಜೀತು ಮತ್ತು ರಮಾ ಕಥಾ ನಾಯಕ ನಾಯಕಿಯರ ಹೆಸರು. ಇವರಿಬ್ಬರೂ ಪ್ರೇಮಿಗಳು. ಪ್ರೇಮಿಗಳನ್ನು ಯಾರು ಇಷ್ಟ ಪಡ್ತಾರೆ ಹೇಳಿ? ಅದೇ ಕಥೆ ಪಾಪದ ಈ ಪ್ರೇಮಿಗಳು ಎದುರಿಸ ಬೇಕಾಗುತ್ತದೆ. ಅಂತಹ ಸಮಯದಲ್ಲಿ ಅವರು ಒಂದು ನಿರ್ಧಾರಕ್ಕೆ ಬರ್ತಾರೆ. ನಾವಿಬ್ಬರು ಇಲ್ಲಿದ್ದರೆ ಉಳಿಗಾಲವಿಲ್ಲ. ಆದ್ದರಿಂದ ಊರು ಬಿಟ್ಟು ಓಡಿ ಹೋಗೋಣ ಸರಿ ಇಬ್ಬರೂ ಊರಿಂದ ಜಾಗ ಖಾಲಿ ಮಾಡ್ತಾರೆ ಅವರಿಬ್ಬರನ್ನು ಹುಡುಕಿಕೊಂಡು ನಾಯಕನ ತಾಯಿ ಬರ್ತಾರೆ. ಜೀತು ಮತ್ತು ರಮಾ ಪ್ರೇಮಿಗಳು. ಚಿತ್ರಕ್ಕೆಕಥೆ ಮತ್ತು ನಿರ್ದೇಶನದ ಹೊಣೆ ಹೊತ್ತಿರುವವರು ನಿರ್ದೇಶಕ ಎಡ್ವಿನ್. ಇದೊಂದು ಜೀತ ಪದ್ದತಿಯಲ್ಲಿ ಅರಳುವ ಪ್ರೇಮ್ ಕಹಾನಿ! ಚಿತ್ರದಲ್ಲಿ ಶ್ರೀಮಂತ ನ ಕೆಲಸ ಬಡವರಿಗೆ ಸಾಲ ನೀಡುವುದು. ಅ ಸಾಲ ತೀರಿಸದೇ ಇದ್ದಾಗ ಜೀತ ಪದ್ಧತಿಗೆ ಕರೆಯುವುದು. ಆ ಸಾಹುಕಾರನ ಮಗ ದುಷ್ಟರಲ್ಲಿ ದುಷ್ಟ. ಇಲ್ಲಿ ಕಥೆಯ ನಾಯಕ ಮತ್ತು ನಾಯಕಿ ಇಬ್ಬರೂ ಬಡವರು. ಈ ಎರಡೂ ಕುಟುಂಬದವರು ಜೀತ ಪದ್ಧತಿಗೆ ಬಲಿಯಾದವರು. ಸಾಹುಕಾರನ ಮಗನಿಗೆ ನಾಯಕಿಯನ್ನು ಪಡೆಯುವ ಆಸೆ ಆಗುತ್ತದೆ.
(ಸೋಮವಾರ 18 ನವೆಂಬರ್ 2013)     
ಸಾಕಷ್ಟು ಅಸಹಜತೆಗಳ ಸರಮಾಲೆ ಹೊಂದಿರುವ ಚಿತ್ರ ಆಂತರ್ಯ ಎಂದು ಕೆಲವು ದೃಶ್ಯಗಳನ್ನು ವೀಕ್ಷಸಿದ ಆರಭದಲ್ಲೇ ಪ್ರೇಕ್ಷಕರಿಗೆ ಅರಿವಾಗಿ ಬಿಡುತ್ತದೆ. ಇತ್ತೀಚೆಗೆ ಚಿತ್ರಗಳಲ್ಲಿ ಭಿನ್ನತೆ ಕಂಡಿರುವ ಪ್ರೇಕ್ಷಕನಿಗೆ ಆಂತರ್ಯ ಅನ್ನೋ ಸಿನಿಮಾ ಅತಿ ಸಾಧಾರಣ ಎಂದು ಅನ್ನಿಸದೆ ಇರದು. ಹಳೆಯ ಚಿತ್ರಗಳಲ್ಲಿ ಅಡಕವಾಗಿರುವ ಕೆಲವು ಸವಕಲು ಸನ್ನಿವೇಶಗಳೆ ಚಿತ್ರದ ಹೈಲೈಟ್. ಒಬ್ಬ ಪೊರ್ಕಿ ನಾಯಕ,ಆತ ತುಂಬಾ ಸಾಮನ್ಯ ಪುಡಿಗಳ್ಳ. ಅವನನ್ನು ಹಿಡಿಯಲು ಪೊಲೀಸರು ಹೆಣಗಾಡುತ್ತಾರೆ.ಚಿತ್ರದಲ್ಲಿ ನಾಯಕ ಅಂದ ಬಳಿಕ ಅವನಿಗೊಂದು ಬೈಕು. ಜೊತೆಗೆ ಕಳ್ಳ ನಾಗಿದ್ದಕ್ಕೆ ಒಂದು ರಿವಾಲ್ವರ್ ಪ್ರೀತಿ ಮಾಡೋಕೆ ಒಬ್ಬ ಹುಡುಗಿ ಎಲ್ಲವು -ಎಲ್ಲರೂ ಸಿಕ್ಕಿದ್ದಾರೆ. ಆದರೆ ಪ್ರೇಕ್ಷರಿಗೆ ನೋಡುವ ಯಾವ ಆಸೆಯೂ ಉಳಿಸಲ್ಲ ಈ ಚಿತ್ರ.
(ಶುಕ್ರವಾರ 18 ಅಕ್ಟೋಬರ್ 2013)     
ಬೆಂಗಳೂರು : ಬಹಳ ದಿನಗಳ ನಂತರ ಒಂದು ಬ್ರೇಕ್‌ಗಾಗಿ ಕಾಯ್ತಾ ಇದ್ದ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಸಕ್ಕರೆ ಸಿನೆಮಾದ ಭರ್ಜರಿ ಓಪನಿಂಗ್‌ನಿಂದ ಖುಷಿ ಸಿಕ್ಕಿದೆ. ಥಿಯೇಟರ್‌ ಒಳಗೆ ಅಭಿಮಾನಿಗಳಿಂದ ಶಿಳ್ಳೆ ಚಪ್ಪಾಳೆಗಳ ಮಹಾಪೂರವೇ ತುಂಬಿಕೊಂಡಿದೆ. ಇಂದಿನ ಫಸ್ಟ್‌ ಡೇ ಫಸ್ಟ್‌ ಶೋ ನೋಡಿದ ಸಕ್ಕರೆ ಅಭಿಮಾನಿಗಳು ಸಖತ್‌ ಖುಷಿಯಿಂದಲೇ ಥಿಯೇಟರ್‌ನಿಂದ ಹೊರ ಬಂದಿದ್ದಾರೆ.
(ಶುಕ್ರವಾರ 23 ಆಗಸ್ಟ್ 2013)     
ಬೆಂಗಳೂರು : ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು.. ಆಚೇಗಾಕೋಳೆ ವೈಫು... ಹಾಡಿನಿಂದಲೇ ಮೋಡಿ ಮಾಡಿದ ಚಿತ್ರ ವಿಕ್ಟರಿ. ಕಾಮಿಡಿ ಸ್ಟಾರ್‌ ಶರಣ್ ಇದೀಗ ಸೂಪರ್‌ ಸ್ಟಾರ್‌ ಹಂತ ತಲುಪಿದ್ದಾನೆ. ಯಾಕೆಂದ್ರೆ ಅವರ ವಿಕ್ಟರಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.
Go to / 56 page(s) | ‹‹ Prev|Next ››