Change View:     
ಸಿನಿಮಾ ಮುನ್ನೋಟ
(ಶುಕ್ರವಾರ 17 ಜನವರಿ 2014)     
ಇಷ್ಟು ದಿನಗಳ ಕಾಲ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಇದ್ದ ತೆಲುಗು ಸಿನಿಮಂದಿ ಈಗ ಮತ್ತೆ ತಮ್ಮತಮ್ಮ ಕೆಲಸಗಳಿಗೆ ಹಿಂತಿರುಗಿದ್ದಾರೆ. ಅವರಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ ಟೀಮ್ ಸಹ ಕೆಲ್ಸಕ್ಕೆ ಹಿಂತಿರುಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಅನುಷ್ಕ. ಈಗ ಆ ಸಿನಿಮಾದ ಬಗ್ಗೆ ಒಂದು ವಿಶೇಷ ಸಂಗತಿ ಹೇಳಲು ಹೊರಟಿದ್ದೇವೆ. ಬಾಹುಬಲಿ ಚಿತ್ರವೂ ಬಿಡುಗಡೆ ಭಾಗ್ಯ ಕಾಣುವುದು ಇನ್ನು ಎರಡು ವರ್ಷದ ಬಳಿಕ. ಆದರೆ ಆ ಚಿತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಂಗತಿಗಳು ಹೊರ ಬೀಳುತ್ತಲೇ ಇರುತ್ತವೆ ದಿನಕ್ಕೊಂದರಂತೆ.
(ಸೋಮವಾರ 19 ಏಪ್ರಿಲ್ 2010)     
ಮಕ್ಕಳ ಬೇಸಿಗೆ ರಜೆಯ ಮಜಾವನ್ನು ಇನ್ನಷ್ಟು ಹೆಚ್ಚಿಸಲು 3ಡಿ ತಂತ್ರಜ್ಞಾನದ ಆನಿಮೇಷನ್ ಚಿತ್ರಕ್ಕಿಂತ ದೊಡ್ಡ ಕೊಡುಗೆ ಸಿಗಲಾರದು. ಇದನ್ನರಿತ ಚಿತ್ರ ನಿರ್ಮಾಪಕರು ವಿಶಿಷ್ಟವಾಗಿ ಚಿತ್ರವನ್ನು ಸಿದ್ಧಪಡಿಸಿ ಶುಕ್ರವಾರ ಬಿಡುಗಡೆಗೆ ಸಜ್ಜುಗೊಳಿಸಿದ್ದಾರೆ. ಇದು ಹಿಕಪ್‌ನ ಕಥೆ. ಯಾರೀತ ಅಂದುಕೊಂಡಿರಾ? ಬರ್ಕ್ ದ್ವೀಪದ ವೈಕಿಂಗ್ ಆದಿವಾಸಿ ಸಮೂಹದ ಮುಖ್ಯಸ್ಥನ ಮಗನೇ ಈ ಪೋರ. 'ಹೌ ಟು ಟ್ರೈನ್ ಯುವರ್ ಡ್ರಾಗನ್' ಹೆಸರಿನ 3ಡಿ ತಂತ್ರಜ್ಞಾನದ ಆನಿಮೇಷನ್ ಚಿತ್ರದ ನಾಯಕ. ಶುಕ್ರವಾರ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಒಂದೂವರೆ ಗಂಟೆಯ ಇಂಗ್ಲೀಷ್ ಸಿನಿಮಾ ಸಂಪೂರ್ಣ ಹಿಕಪ್‌ನ ಸುತ್ತವೇ ಹೆಣೆಯಲಾಗಿದೆ. ಬರ್ಕ್ ದ್ವೀಪದ ಆದಿವಾಸಿಗಳಿಗೆ ಬೆಂಕಿಯುಗಳುವ ಡ್ರ್ಯಾಗನ್‌ಗಳ ಜೊತೆ ಸೆಣಸುವುದೇ ಬದುಕು. ಆಗಾಗ ಸಮುದ್ರ ತಳದಿಂದ ಮೇಲೆದ್ದು ಬರುವ ಡ್ರ್ಯಾಗನ್‌ಗಳು ಆದಿವಾಸಿಗಳ ಆಹಾರ ಕಬಳಿಸುತ್ತವೆ, ಮನೆಗಳನ್ನು ಧ್ವಂಸಗೊಳಿಸುತ್ತವೆ. ಇವುಗಳ ಸಮಸ್ಯೆಗೆ ಪುಟ್ಟ ಪೋರ ಹೇಗೆ ಪರಿಹಾರ ಕಲ್ಪಿಸುತ್ತಾನೆ ಎಂಬುದೇ ಈ ಚಿತ್ರದ ಕಥಾವಸ್ತು.
(ಬುಧವಾರ 10 ಮಾರ್ಚ್ 2010)     
ಕನ್ನಡದ ಓ ನನ್ನ ನಲ್ಲೆ, ಹೂಂ ಅಂತೀಯಾ ಊಹೂಂ ಅಂತೀಯಾ, ಸೂರ್ಯವಂಶಿ ಮತ್ತಿತರ ಚಿತ್ರಗಳಲ್ಲಿ ನಟಿಸಿದ ಹಾಟ್ ಬೆಡಗಿ ಇಷಾ ಕೊಪ್ಪಿಕರ್ ಇನ್ನು ಮುಂದೆ ಸಿನಿಮಾದಲ್ಲಿ ಹಾಟ್ ದೃಶ್ಯಾವಳಿಗಳಲ್ಲಿ ನಟಿಸೋದಿಲ್ಲವಂತೆ. ಈವರೆಗೆ ನಟನೆಗೂ ಸೈ ಬಿಚ್ಚುವುದಕ್ಕೂ ಜೈ ಎನ್ನುತ್ತಿದ್ದ ಇಶಾ ಕೊಪ್ಪಿಕರ್ ಇದೀಗ ತಾನು ಮದುವೆಯಾಗಿರುವ ಸಂಪ್ರದಾಯಸ್ಥ ಹೆಣ್ಣು. ಹಾಗಾಗಿ ಇನ್ನು ಮುಂದೆ ಹಾಟ್ ದೃಶ್ಯಕ್ಕೆ ನೋ ಚಾನ್ಸ್ ಎಂದಿದ್ದಾಳೆ. 2009ರಲ್ಲಿ ತನ್ನ ಪ್ರಿಯಕರ ಟಿಮ್ಮಿ ನಾರಂಗ್ ಅವರನ್ನು ಮದುವೆಯಾದ ಇಶಾ ಮದುವೆಯ ನಂತರವೂ ನಟನೆಗೆ ಗುಡ್ ಬೈ ಹೇಳಿಲ್ಲ. ಹಾಟ್ ದೃಶ್ಯಾವಳಿಗೆ ಮಾತ್ರ ಅವಕಾಶವಿಲ್ಲ ಎಂದಿದ್ದಾಳೆ. ಆದರೂ ಪಾಲಿಗೆ ಬಂದದ್ದೇ ಪಂಚಾಮೃತ ಎಂಬತೆ ಹಾಗೆ ಹೇಳುವ ಮೊದಲು ಈವರೆಗೆ ಯಾರೂ ನಟಿಸದೆ ಇರುವಂಥ ಮೈನವಿರೇಳಿಸುವ ಹಾಟ್ ದೃಶ್ಯದಲ್ಲಿ ನಟಿಸಿದ್ದಾಳೆ.
(ಸೋಮವಾರ 15 ಫೆಬ್ರವರಿ 2010)     
ಸುದೀಪ್ ಅಭಿನಯದ ಮತ್ತೊಂದು ಹಿಂದಿ ಚಿತ್ರವೀಗ ತೆರೆಗೆ ಬರಲು ಸಿದ್ಧವಾಗಿದೆ. ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಮಿಲಿಂದ್ ನಿರ್ದೇಶನದ ಫೂಂಕ್ ಭಾಗ 2 ಚಿತ್ರ ಇದೇ ಏಪ್ರಿಲ್ 9ರಂದು ತೆರೆಗೆ ಬರಲಿದೆ. ಫೂಂಕ್ ಚಿತ್ರದ ಮೂಲಕ ಬಾಲಿವುಡ್ಡಿಗೆ ಕಾಲಿಟ್ಟ ಸುದೀಪ್, ಈಗ ಅದೇ ಫೂಂಕ್ ಚಿತ್ರದ ಎರಡನೇ ಭಾಗದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಸಿನಿಮಾ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿಯೂ ಈಗ ಕೇಳಿ ಬರುತ್ತಿದೆ. ತೆಲುಗಿನಲ್ಲಿ ಆವಹಂ ಹಾಗೂ ತಮಿಳಿನಲ್ಲಿ ಬೊಮ್ಮೈ 2 ಎಂಬ ಹೆಸರಿನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಸುದ್ದಿಯೂ ಇದೆ. ಆದರೂ ಶಂಖದಿಂದಲೇ ತೀರ್ಥ ಇನ್ನೂ ಹೊರಬಂದಿಲ್ಲ, ಅರ್ಥಾತ್ ರಾಮ್ ಗೋಪಾಲ್ ವರ್ಮಾ ಈ ಚಿತ್ರದ ಬಗ್ಗೆ ಅಧಿಕೃತವಾಗಿ ಇನ್ನೇನೂ ಪ್ರಕಟಿಸಿಲ್ಲ.
(ಸೋಮವಾರ 14 ಡಿಸೆಂಬರ್ 2009)     
ಜಬ್ ವಿ ಮೆಟ್ ಚಿತ್ರದಲ್ಲಿ ಎಲ್ಲರೂ ಮಂತ್ರಮುಗ್ಧರಾಗುವಂತೆ ನಟಿಸಿ ಮನಮನದಲ್ಲಿ ಅದ್ಭುತ ರೊಮ್ಯಾಂಟಿಕ್ ಜೋಡಿ ಎಂಬ ಸ್ಥಾನ ಗಿಟ್ಟಿಸಿಕೊಂಡ ಜೋಡಿ ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್. ಆದರೆ ಆವರೆಗೆ ಅಮರ ಮಧುರ ಪ್ರೇಮ..., ನಾನೇ ವೀಣೆ ನೀನೇ ತಂತಿ... ಎಂದೆಲ್ಲ ಹಾಡುತ್ತಿದ್ದ ಈ ಇಬ್ಬರು ಜಬ್ ವಿ ಮೆಟ್ ತಕ್ಷಣವೇ ಬೇರಾದರು. ಒಬ್ಬರ ಮುಖ ಇನ್ನೊಬ್ಬರಿಗೆ ಕಂಡರಾಗದಂತೆ ಬೇರೆಬೇರೆಯಾದರು. ಕರೀನಾ ಸೈಫ್ ತೆಕ್ಕೆಗೊರಗಿ ನಿರಾಳವಾಗಿ ಉಸಿರಾಡಿದರೆ, ಅತ್ತ ಶಾಹಿದ್ ವಿಲವಿಲನೆ ಒದ್ದಾಡಿ ವಾರಕ್ಕೊಬ್ಬ ನಟಿಯರ ಜೊತೆಗೆ ಗಾಸಿಪ್ ಕಾಲಂಗಳನ್ನು ಅಲಂಕರಿಸಲಾರಂಭಿಸಿದ. ಈಗ ಅಂತೂ ಇಂತೂ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ಅದೂ ಕೂಡಾ ಇದೇ ಮುಂಬರುವ ವ್ಯಾಲೆಂಟೈನ್ ಡೇ ಅರ್ಥಾತ್ ಪ್ರೇಮಿಗಳ ದಿನದಂದು. ಹಾಗಾದ್ರೆ, ಕರೀನಾ ಸೈಫ್‌ಗೆ ಕೈಕೊಟ್ಟಳಾ ಎಂದು ಆಶ್ಚರ್ಯಚಕಿತರಾಗಬೇಡಿ. ಆದರೆ, ಈ ಹಳೇ ಪ್ರೇಮಿಗಳು ಪ್ರೇಮಿಗಳ ದಿನದಂದು ಒಂದಾಗುತ್ತಿರುವುದಂತೂ ಖಂಡಿತಾ ಸತ್ಯ. ಆದರೆ ಒಂದಾಗುತ್ತಿರೋದು ಮಾತ್ರ ತೆರೆಯ ಮೇಲೆ! ಶಾಹಿದ್ ಕರೀನಾ ಜೋಡಿಯ ಕುಂಟುತ್ತಾ ಸಾಗಿ ಕೊನೆಗೂ ಚಿತ್ರೀಕರಣ ಮುಗಿಸಿದ ರೊಮ್ಯಾಂಟಿಕ್ ಲವ್ ಸ್ಟೋರಿ ಮಿಲೇಂಗೇ ಮಿಲೇಂಗೇ ಚಿತ್ರ ಅಂತೂ 2010ರ ಫೆಬ್ರವರಿ 14ರಂದು ಬಿಡುಗಡೆ ಕಾಣಲಿದೆ!!!
Go to / 12 page(s) | ‹‹ Prev|Next ››