|
ಬಹುದೊಡ್ಡ ಬಜೆಟ್, ಹೃತಿಕ್‌ನ ಸ್ಟಾರ್ ಗಿರಿ, ದೊಡ್ಡ ನಟರ ತಾರಾಗಣ, ಹೆಸರಾಂತ ನಿರ್ದೇಶಕ ನಿರ್ಮಾಪಕರ ಬಣ ಹೀಗೆ ಎಲ್ಲವೂ ಕೈಟ್ಸ್ ಎಂಬ ಚಿತ್ರದ ಮೂಲಕ ಕಳೆದೊಂದು ವರ್ಷದಿಂದ ಸದ್ದು ಮಾಡುತ್ತಲೇ ಇತ್ತು. ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಚಿತ್ರೀಕರಣಗೊಂಡು ಭಾರೀ ಸುದ್ದಿ ಮಾಡಿದ್ದ ಕೈಟ್ಸ್ ಚಿತ್ರ ಕೊನೆಗೂ ಬಿಡುಗಡೆಯಾಗಿದೆ. ಕೈಟ್ಸ್ ಚಿತ್ರ ತ್ರಿಭಾಷಾ ಚಿತ್ರವಾಗಿದ್ದು ಇದು ಏಕಕಾಲದಲ್ಲಿ ಹಿಂದಿ ಇಂಗ್ಲೀಷ್ ಹಾಗೂ ಸ್ಪ್ಯಾನಿಷ್ ಭಾಷೆಯಲ್ಲಿ ನಿರ್ಮಾಣಗೊಂಡ ಚಿತ್ರ. ಪ್ರೇಕ್ಷಕರನ್ನು ಎರಡು ತಾಸು ಹಿಡಿದಿಡಬೇಕಾದ ತಂತ್ರಗಳನ್ನೆಲ್ಲ ಇಲ್ಲಿ ಬಳಸಲಾದರೂ, ಚಿತ್ರದ ಬಗ್ಗೆ ನೀರಸ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಆದರೂ, ನಂತರದ ದಿನಗಳಲ್ಲಿ ಕಲೆಕ್ಷನ್‌ಗೆ ಮುಳುವಾಗಿದೆ. ಹೃತಿಕ್ ರೋಷನ್ ಚಿತ್ರವೊಂದು ಬಿಡುಗಡೆ ಕಾಣದೆ ಭರ್ಜರಿ ಎರಡು ವರ್ಷಗಳೇ ಸಂದಿವೆ. ಜೋಧಾ ಅಕ್ಬರ್ ನಂತರ ಬಿಡುಗಡೆಯಾದ ಹೃತಿಕ್ ಚಿತ್ರವಿದು. ಹಾಗಾಗಿ ನಿರೀಕ್ಷೆ ಜೋರಾಗಿಯೇ ಇತ್ತು.
|