|
ಬಾಲಿವುಡ್‌ನ ಹಾಟ್ ಬೆಡಗಿ ಬಿಪಾಶಾ ಬಸು ಹಾಗೂ ಯುವತಿಯರ ಹೃದಯಕಳ್ಳ ಜಾನ್ ಅಬ್ರಾಹಂ ಅವರ ನಡುವಿನ ಪ್ರೀತಿಗೆ ಇದೀಗ ಭರ್ಜರಿ 9 ವರ್ಷ ತುಂಬಿದೆ. ಜಿಸ್ಮ್ ಚಿತ್ರದ ಸಂದರ್ಭದಲ್ಲಿ ಅಂಕುರಿಸಿದ ಪ್ರೇಮ ಇನ್ನೂ ಗಟ್ಟಿಯಾಗಿದೆ. ಈಗ ಅವರಿಬ್ಬರ ಪ್ರೇಮಕ್ಕೆ ಬರೋಬ್ಬರಿ 9 ವರ್ಷ! ಅದೆಲ್ಲಾ ಸರಿ, 9 ವರ್ಷದ ಪ್ರೇಮ ಅಂತೀರಿ, ಮದ್ವೆ ಯಾವಾಗ ಎಂದರೆ ಬಿಪಾಶಾ ಕೊಡುವ ಉತ್ತರವೇ ಬೇರೆ. ನಮ್ಮ ನಡುವೆ ಅತ್ಯದ್ಭುತ ಅನುಬಂಧವಿದೆ. ನಾವಿಬ್ಬರು ಪರಸ್ಪರ ಗಾಢವಾಗಿ ಪ್ರೀತಿಸ್ತಾ ಇದ್ದೀವಿ. ನನ್ನ ನಡುವೆ ಯಾವ ಅಂತರವೂ ಇಲ್ಲ. ಸುಖ, ಸಂತೋಷ, ನೋವು ಎಲ್ಲವನ್ನೂ ನಾವು ಪರಸ್ಪರ ಸಮಾನವಾಗಿ ಹಂಚಿಕೊಳ್ಳುತ್ತೀವಿ. ದಂಪತಿಗಳಲ್ಲಿ ಇವರುವ ಸಾಮರಸ್ಯ ನಮ್ಮಲ್ಲಿದೆ ಅಂದ ಮೇಲೆ ಮದ್ವೆ ಯಾಕೆ? ನಮೆ ಅದರ ಅಗತ್ಯ ಕಾಣೋದಿಲ್ಲ ಎನ್ನುತ್ತಾರೆ ಈ ಹಾಟ್ ಬೆಡಗಿ.
|