Change View:     
ಸಂತಾ-ಬಂತಾ
(ಸೋಮವಾರ 2 ನವೆಂಬರ್ 2009)     
ಸಂತಾ ಮತ್ತು ಬಂತಾ ಸೇರಿಕೊಂಡು 'ಆಪರೇಷನ್ ಹೋಟೆಲ್' ಪ್ಲಾನ್ ಮಾಡುತ್ತಿದ್ದರು. ಬಂತಾ: ಅಲ್ಲ ಮರಾಯಾ, ಆಕಸ್ಮಾತ್ ಬಾಂಬ್ ಸ್ಫೋಟಿಸಿದರೆ ನಮ್ಮ ಗತಿ ಏನು? ಸಂತಾ: ಯೋಚನೆ ಮಾಡಬೇಡ ಕಣೋ, ನನ್ನಲ್ಲಿ ಇನ್ನೊಂದು ಬಾಂಬ್ ಇದೆ..!
(ಸೋಮವಾರ 2 ನವೆಂಬರ್ 2009)     
ಸಂತಾನ ಹೆಂಡರಿ: ರೀ, ನಿಮ್ಮ ಸ್ನೇಹಿತ ಬಂತಾ ಆ ಗೌರಿನ ಮದುವೆ ಆಗ್ತಾಯಿದ್ದಾನಂತೇ, ನೀವು ಹೇಗಾದರೂ ಮಾಡಿ ತಡೀಬಾರ್ದಾ ? ಸಂತಾ: ನಾನ್ಯಾಕೆ ತಡೀಲಿ, ನಾನು ಮದುವೆ ಆಗುವಾಗ ಅವನು ಬಂದು ತಡಿದಿದ್ನಾ ?
(ಸೋಮವಾರ 2 ನವೆಂಬರ್ 2009)     
ಇಲೆಕ್ಟ್ರಾನಿಕ್ ಅಂಗಡಿಗೆ ತೆರಳಿದ ಸಂತಾ, ಸಂತಾ: ನೀನು ನನಗೆ ಮೋಸ ಮಾಡಿದ್ದೀಯಾ. ಅಂಗಡಿಯವ: ಅದೇಗೆ? ಸಂತಾ: ಜಪಾನ್‌ನ ರೇಡಿಯೋ ಅಂತ ಸುಳ್ಳು ಹೇಳಿದ್ದೀಯಾ. ಆದನ್ನು ಸ್ವಿಚ್ ಆನ್ ಮಾಡಿದಾಗ 'ಆಲ್ ಇಂಡಿಯಾ ರೇಡಿಯೋ' ಅಂತಾ ಹೇಳತ್ತೆ.
(ಸೋಮವಾರ 2 ನವೆಂಬರ್ 2009)     
ಸಂತಾ: ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ಯಾಕೆ ಬರಲಿಲ್ಲ...? ಬಂತಾ: ನಿನ್ನ ಪತ್ರ ಸಿಗಲೇ ಇಲ್ಲ ಕಣೋ... ಸಂತಾ: ಪತ್ರ ಸಿಗದಿದ್ರು ಬಾ ಅಂತ ಬರೆದಿದ್ನಲ್ಲಾ ಮಾರಾಯ..!
(ಸೋಮವಾರ 2 ನವೆಂಬರ್ 2009)     
ನೂತನವಾಗಿ ಕೆಲಸಕ್ಕೆ ಸೇರಿಕೊಂಡ ಸಂತಾ ಬೆಳಗ್ಗಿನಿಂದ ಸಂಜೆತನಕ ಕಷ್ಟಪಟ್ಟು ದುಡಿದ ಅದನ್ನು ಗಮನಿಸಿದ ಬಾಸ್, ತುಂಬಾ ಕೆಲಸ ಮಾಡಿದ್ದೀರಾ ಸರಿ ಏನೇನೂ ಮಾಡಿದಿರಿ ಎಂದು ಪ್ರಶ್ನಿಸಿದರು. ಸಂತಾ: ಕಂಪ್ಯೂಟರ್ ಕೀ ಬೋರ್ಡ್‌ನಲ್ಲಿ ಅಕ್ಷರಗಳು ಚೆಲ್ಲಾಪಿಲ್ಲಿಯಾಗಿತ್ತು. ಅದನ್ನೆಲ್ಲ ಸರಿಪಡಿಸಿಕೊಂಡೆ ಎಂದು ಉತ್ತರ ಕೊಟ್ಟ.
Go to / 46 page(s) | ‹‹ Prev|Next ››