Change View:     
ಮಕ್ಕಳು
(ಶುಕ್ರವಾರ 6 ನವೆಂಬರ್ 2009)     
ಪ್ರಧಾನ ಮಂತ್ರಿ ಸಂಜೆ ಹೊತ್ತು ಮಾತ್ರ ವಾಕಿಂಗ್‌ಗೆ ಹೋಗ್ತರೆ. ಬೆಳಗ್ಗೆ ಹೋಗಲ್ಲಾ, ಯಾಕೆ ಗೊತ್ತಾ? ಯಾಕೆಂದ್ರೆ ಅವರು ಪಿಎಂ, ಎಎಂ ಅಲ್ಲ.
(ಶುಕ್ರವಾರ 6 ನವೆಂಬರ್ 2009)     
ಮೇಷ್ಟ್ರು: ಭಾರತದಲ್ಲಿ ಪ್ರತಿ 5 ಸೆಕೆಂಡುಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ ಎಂದರು. ಗುಂಡಾ: ನಾವು ಆದಷ್ಟು ಬೇಗ ಆ ಮಹಿಳೆಯನ್ನು ಕಂಡುಹಿಡಿಯಬೇಕು ಸಾರ್ ಎಂದ.
(ಶುಕ್ರವಾರ 6 ನವೆಂಬರ್ 2009)     
ಗುಂಡಾ ಕಾಲಿನ ಮೇಲೆ ಆಕಸ್ಮಾತ್ ಕಾರೊಂದು ಹೋಗಿಬಿಡ್ತು. ಅವನು ಮೊದಲು ಏನು ಮಾಡಬೇಕು ಗೊತ್ತೆ? ಕಾರಿನ ನಂಬರನ್ನು ಗುರ್ತು ಮಾಡ್ಕೊಳ್ಳಬೇಕು..!
(ಶುಕ್ರವಾರ 6 ನವೆಂಬರ್ 2009)     
ಕಪ್ಪೆ: ನೀನು ಮೋಸಗಾರ ಹಾವು: ಸುಳ್ಳು ಹೇಳಬೇಡ ಕಪ್ಪೆ: ನೀನೇ ಮೋಸಗಾರ ಎಂದು ಹೇಳಿ ಬಾವಿಗೆ ಹಾರಿತು.. ಹಾವು: ದೇವರೇ., ಇಷ್ಟಕ್ಕೆಲ್ಲ ಯಾರದರೂ ಆತ್ಮಹತ್ಯೆ ಮಾಡ್ಕೊತಾರಾ?
(ಶುಕ್ರವಾರ 6 ನವೆಂಬರ್ 2009)     
ಅಧ್ಯಾಪಕ: ಚಿತ್ರ ಬಡಿಸಿಲ್ವಾ? ಪುಟ್ಟು: ಬ್ಯಾಕ್ಟೀರಿಯಾ ಚಿತ್ರ ಬಿಡಿಸಿದ್ದೀನಿ ಅಧ್ಯಾಪಕ: ಏನೂ ಕಾಣ್ತಾ ಇಲ್ವಲ್ಲೋ.. ಬರೀ ಖಾಲಿ ಪೇಪರ್ ಇದೆ..? ಪುಟ್ಟು: ಬ್ಯಾಕ್ಟೀರಿಯಾ ಬರೀ ಕಣ್ಣಿಗೆ ಕಾಣೋದಿಲ್ಲ ಸಾರ್. ಸೂಕ್ಷ್ಣ ದರ್ಶಕ ಉಪಯೋಗಿಸಿ.
Go to / 42 page(s) | ‹‹ Prev|Next ››