Change View:     
ಇನ್ನಷ್ಟು ಹಾಸ್ಯ...
(ಸೋಮವಾರ 19 ಸೆಪ್ಟೆಂಬರ್ 2011)     
ಗುಂಡನ ಮಗ ಮೈಕ್ರೋಸಾಫ್ಟ್ ವರ್ಡ್ ಕಲಿತಿದ್ದಾನೆ. ಅವನಿಗೀಗ ಮೈಕ್ರೋಸಾಫ್ಟ್ ಸೆಂಟೆನ್ಸ್ ಕಲಿಯಬೇಕಾಂತೆ.
(ಸೋಮವಾರ 19 ಸೆಪ್ಟೆಂಬರ್ 2011)     
ಕಿಟ್ಟು: ಮಧ್ಯರಾತ್ರಿಯಲ್ಲಿ ಎಲ್ಲಿ ಹೋಗುತ್ತಿದ್ದೀಯಾ ಗುಂಡ: ಮದ್ಯಪಾನದ ಬಗ್ಗೆ ಉಪನ್ಯಾಸ ಕೇಳೊಕೆ. ಕಿಟ್ಟು: ಅದು ಸರಿ, ಉಪನ್ಯಾಸ ಮಾಡ್ತಾ ಇರೋರು ಯಾರು? ಗುಂಡ: ನನ್ನ ಹೆಂಡ್ತಿ.
(ಶನಿವಾರ 17 ಸೆಪ್ಟೆಂಬರ್ 2011)     
ಯಾರೊ ಭಾರತೀಯ ಕ್ರಿಕೆಟ್ ತಂಡವನ್ನು ಕಿಡ್ನಾಪ್ ಮಾಡಿ 50 ಕೋಟಿ ರೂಪಾಯಿ ಬೇಡಿಕೆ ಇಟ್ರು. ಕೊಡದಿದ್ರೆ ಅವರನ್ನು ಸೀಮೆಎಣ್ಣೆ ಸುರಿದು ಸುಟ್ಟ್ ಹಾಕ್ತೀವಿ.. ಕೊಡಿ ಅಂದ್ರು.. ಅದಕ್ಕೆ ನಾನು 25 ಲೀಟರ್ ಸೀಮೆಎಣ್ಣೆ ಕೊಟ್ಟಿದ್ದೇನೆ..!
(ಶನಿವಾರ 17 ಸೆಪ್ಟೆಂಬರ್ 2011)     
ನಾನು ಭಾರತವನ್ನು ತೊರೆಯುತ್ತಿದ್ದೇನೆ. ಕಾರಣ ಇಷ್ಟೇ-- ದೀಪಿಕಾ ಪಡುಕೋಣೆ ಗರ್ಭಿಣಿಯಾದದ್ದಕ್ಕೆ ನಾನೇ ಕಾರಣ ಅಂತ ಮಾಧ್ಯಮಗಳು ಬರೆದುಕೊಂಡಿವೆ. ಬಾಯ್...!
(ಶುಕ್ರವಾರ 16 ಸೆಪ್ಟೆಂಬರ್ 2011)     
ಭಾರತದಲ್ಲಿ ಪರೀಕ್ಷಾ ನಿಯಮಗಳನ್ನು ಮೀಸಲಾತಿಗೆ ಅನುಗುಣವಾಗಿ ಸಂಪೂರ್ಣ ಬದಲಾವಣೆಗೊಳಪಡಿಸಿದ ನಂತರ ಪ್ರಶ್ನೆ ಪತ್ರಿಕೆಯಲ್ಲಿ ಹೀಗೆ ಸೂಚನೆ ನೀಡಲಾಗುತ್ತದೆ. ಸಾಮಾನ್ಯ ವಿದ್ಯಾರ್ಥಿಗಳು: ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದು ಕಡ್ಡಾಯ. ಓಬಿಸಿ ವಿದ್ಯಾರ್ಥಿಗಳು: ಯಾವುದಾದರೊಂದು ಪ್ರಶ್ನೆಗೆ ಉತ್ತರಿಸಿ. ಪರಿಶಿಷ್ಟ ಪಂಗಡ: ಪ್ರಶ್ನೆಗಳನ್ನು ಕೇವಲ ಓದಿದರಷ್ಟೇ ಸಾಕು. ಪರಿಶಿಷ್ಟ ವರ್ಗ: ಪರೀಕ್ಷೆಗೆ ಬಂದಿದ್ದಕ್ಕೆ ಧನ್ಯವಾದಗಳು..!
Go to / 573 page(s) | ‹‹ Prev|Next ››