(ಮಂಗಳವಾರ 28 ಫೆಬ್ರವರಿ 2012)
ಉಗುರು ದೇಹದ ಒಂದು ಭಾಗವಾಗಿರುವ ಕೆರಾಟಿನ್ ಎಂಬ ಪ್ರೋಟೀನ್‌ನಿಂದ ರಚಿತವಾಗಿವೆ. ದಿನದಲ್ಲಿ 0.01 ಸೆಂಟಿಮೀಟರ್‌ನಷ್ಟು ಬೆಳೆಯುತ್ತವೆ. ದೇಹದ ಇತರ ಭಾಗಗಳಿಗೆ ನಾವೆಷ್ಟು ಗಮನ ಕಾಳಜಿ ನೀಡುತ್ತೇವೆಯೋ, ಅದೇ ರೀತಿಯ ಕಾಳಜಿ ಮತ್ತು ಗಮನವನ್ನು ನಾವು ಉಗುರಿಗೆ ನೀಡುವುದು ಅವಶ್ಯಕ. ಉಗುರುಗಳು ಪ್ರತಿದಿನ ಬೆಳೆಯುವುದರಿಂದ ಅವುಗಳನ್ನು ನಿಯಮಿತವಾಗಿ ಶುಚಿಯಾಗಿಟ್ಟುಕೊಳ್ಳಬೇಕು ಹಾಗೂ ಸುಂದರ ಆಕಾರವನ್ನು ಅವಕ್ಕೆ ನೀಡಬೇಕು.
|