|
ಹೃದಯಬೇನೆಗಳು ಕಾಣಿಸಿಕೊಳ್ಳುವ ಅಪಾಯದಿಂದ ಮುಕ್ತರಾಗಲು ಮಹಿಳೆಯರು ಹೆಚ್ಚೆಚ್ಚು ಹಣ್ಣು , ತರಕಾರಿಗಳನ್ನು ತಿನ್ನಬೇಕು ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಹಣ್ಣು, ತರಕಾರಿಯಂಥ ಆಹಾರ ಕಡಿಮೆ ಸೇವಿಸುವ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚೆಚ್ಚು ಹಣ್ಣು, ತರಕಾರಿ ತಿನ್ನುವ ಮಹಿಳೆಯರಲ್ಲಿ 20 ವರ್ಷಗಳ ನಂತರ ಹೃದಯದ ರಕ್ತನಾಳಗಳಲ್ಲಿ ಲೋಳೆಯಂತಹ ನಿಕ್ಷೇಪದ ಶೇಖರಣೆ ಕಡಿಮೆಯಾಗುತ್ತದೆ. ಲೋಳೆಯಂಥ ನಿಕ್ಷೇಪ ಅಥವಾ ಕೊಬ್ಬಿನ ಶೇಖರಣೆಯಿಂದ ಹೃದಯಬೇನೆ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ಅಪಾಯ ಹೆಚ್ಚಿರುತ್ತದೆ.
|